ಓ ಪ್ರೇಮವೇ ಇದು ಮನೋಜ್ ಕುಮಾರ್ ನಿರ್ದೇಶಿಸಿದ 2018 ರ ಭಾರತೀಯ ಕನ್ನಡ ಭಾಷೆಯ ಪ್ರಣಯ ಕಥಾ ಚಲನಚಿತ್ರವಾಗಿದೆ ಮತ್ತು ಮನೋಜ್ ಕುಮಾರ್ ಮತ್ತು ನಿಕ್ಕಿ ಗಲ್ರಾನಿ ನಟಿಸಿದ್ದಾರೆ. == ಪಾತ್ರವರ್ಗ == ರಾಹುಲ್ ಆಗಿ ಮನೋಜ್ ಕುಮಾರ್ ಅಂಜಲಿಯಾಗಿ ನಿಕ್ಕಿ ಗಲ್ರಾನಿ ಅಪೂರ್ವ ರಂಗಾಯಣ ರಘು ಸಾಧು ಕೋಕಿಲ ಪ್ರಶಾಂತ್ ಸಿದ್ದಿ ಹುಚ್ಚ ವೆಂಕಟ್ ಅತಿಥಿ ಪಾತ್ರದಲ್ಲಿ == ನಿರ್ಮಾಣ == ಮೊಗ್ಗಿನ ಮನಸು ಚಿತ್ರದಲ್ಲಿ ನಟಿಸಿದ್ದ ಮನೋಜ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ನೈಜ ಕಥೆಯನ್ನು ಆಧರಿಸಿದೆ. ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, "ಗರಿ ಗೆದರಿ" ಹಾಡಿನ ಚಿತ್ರೀಕರಣ ಸ್ವಿಟರ್‌ಲ್ಯಾಂಡ್‌ನಲ್ಲಿ ನಡೆದಿದೆ. ಸಿದ್ಧಾರ್ಥ ಚಿತ್ರದೊಂದಿಗೆ ಕನ್ನದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಿಕ್ಕಿ ಗಲ್ರಾನಿ ನಾಯಕಿಯಾಗಿ ನಟಿಸಿದ್ದಾರೆ. ಫೆಮಿನಾ ಮಿಸ್ ಇಂಡಿಯಾ 2016 ರ ಸೌತ್ ಫೈನಲಿಸ್ಟ್ ಅಪೂರ್ವ ರೈ ಅವರು ಚಿತ್ರದಲ್ಲಿ ಒಂದು ಪಾತ್ರವನ್ನು ನಿರ್ವಹಿಸಲು ಸಹಿ ಹಾಕಿದರು. == ಹಿನ್ನೆಲೆಸಂಗೀತ == ಹಾಡುಗಳನ್ನು ಆನಂದ್ ರಾಜವಿಕ್ರಮ್ ಮತ್ತು ರಾಹುಲ್ ದೇವ್ ಸಂಯೋಜಿಸಿದ್ದಾರೆ. ಎಲ್ಲ ಹಾಡುಗಳು ಚಂದನ್ ರಾಜ್, ಜಯಂತ ಕಾಯ್ಕಿಣಿ, ಕವಿರಾಜ್, ಮತ್ತು ಚೇತನ್ ಕುಮಾರ್ ಅವರಿಂದ ರಚಿತ == ಬಿಡುಗಡೆ == ಟೈಮ್ಸ್ ಆಫ್ ಇಂಡಿಯಾ ಚಿತ್ರಕ್ಕೆ ಐದು ಸ್ಟಾರ್‌ಗಳಲ್ಲಿ ಎರಡನ್ನು ನೀಡಿತು ಮತ್ತು "ಈ ಚಿತ್ರವು ಹಳೆಯ-ಶೈಲಿಯ ಪ್ರೇಮಕಥೆಯನ್ನು ಬಯಸುವವರ ಆಯ್ಕೆಯಾಗಬಹುದು, " ಎಂದು ಬರೆದಿದೆ. ನ್ಯೂಸ್ ಮಿನಿಟ್ "ಒಟ್ಟಿನಲ್ಲಿ, ನೀವು ಗುರುತಿಸಿಕೊಳ್ಳಬಹುದಾದ ಪಾತ್ರಗಳೊಂದಿಗೆ ಉತ್ತಮವಾಗಿ ರಚಿಸಲಾದ ಪ್ರಣಯ ಚಿತ್ರವನ್ನು ಹುಡುಕುತ್ತಿದ್ದರೆ, 'ಓ ಪ್ರೇಮವೇ' ಅಂತಹದ್ದಲ್ಲ" ಎಂದು ಬರೆದಿದೆ. == ಉಲ್ಲೇಖಗಳು ==